Tuesday, October 28, 2008

ರಾಕೆಟ್ ಅಣಕು-ತುಣುಕು

ಭಾರತದ ಮಹತ್ವಾಕಾಂಕ್ಷಿ ರಾಕೆಟ್ ಚಂದ್ರನತ್ತ ಸಾಗುತ್ತಿದೆ. ಇಲ್ಲಿ ರಾಕೆಟ್ ತೆರಳಿದ ನಂತರದ ಕೆಲವು ಕಲ್ಪನಾ ಅಣಕುಗಳಿವೆ.

*ರಾಕೆಟ್ ಮೊನ್ನೆ ತೆರಳಿದ ಮರುದಿನ ಬೆಂಗಳೂರು ಹಾಗೂ ರಾಜ್ಯದಾದ್ಯಂತ ಭಾರಿ ಮಳೆಯಾಯಿತು. ಇದಕ್ಕೆ ಕಾರಣ ರಾಕೆಟ್ ತನ್ನ ಬೆಂಕಿಯಿಂದ ಮೋಡವನ್ನು ಕರಗಿಸಿದ್ದು ಕಾರಣವಂತೆ...! ಇನ್ನು ಮುಂದೆ ಬರಗಾಲ ಸೃಷ್ಟಿಯಾದರೆ ಸುಯ್ಯಂತಾ.... ಒಂದು ರಾಕೆಟ್ ಬಿಟ್ರೆ ಎಂಗೆ ಎಂದು ಯಡ್ಡಿ ಯೋಚಿಸುತ್ತಿದ್ದಾರಂತೆ

*ರಾಕೆಟ್ ಭೂಮಿಗೆ ಕೆಲವು ಸುತ್ತು ಬಂತು ಕಾರಣ ಅದರ ಹಿಂಬಾಗಕ್ಕೆ ಬೆಂಕಿಕೊಟ್ಟವನು ಯಾರೆಂದು ಇನ್ನು ಗೊತ್ತಾಗಿಲ್ವಂತೆ...

*ರಾಕೆಟ್ ಸ್ಪೀಡ್ ಹೋಗ್ಲಿಕ್ಕೆ ಕಾರಣ ನಿಮ್ಗೆ ತಿಳಿದಿರುವಂತೆ ಹಿಂದಕ್ಕೆ ಬೆಂಕಿ ಕೊಟ್ಟಿದ್ದು...ಪಾಪ ಅದು ಬೇಗ ಚಂದ್ರನತ್ರ ಹೋಗಿ ಹಿಂಬಾಗವನ್ನು ನೀರಲ್ಲಿ ಇರಿಸುವ ಅವಸರದಲ್ಲಿ ಅಲ್ಲೋಗಿದೆ.ಆದ್ರೆ ಅಲ್ಲಿ ನೀರಿಲ್ಲ ಅನ್ನೋದು ಅದ್ಕೆ ಗೊತ್ತೆ ಇಲ್ಲಂತೆ..

*ಹನುಮಂತ ಲಂಕೆಗೆ ತೆರಳಿ ಎಲ್ಲ ಹೊತ್ತಿಸಿ ಬಂದಂತೆ ಚಂದ್ರನಿಗೆ ಬೆಂಕಿ ತಾಕಿಸೇ ಬರೋದು ಅಂತ ರಾಕೆಟ್ ಗೊಣಗೋದು ಬ್ಯಾಲಾಳಿನವರಿಗೆ ಗೊತ್ತಾಯಿತಂತೆ

*ಚಂದಮಾಮನಿಗೆ ತನ್ನ ಅಳಿಯ ಬರ್ತಿದ್ದಾನೆ ಅನ್ನೋದು ಗೊತ್ತಿಲ್ಲ...ಗೊತ್ತಿದ್ರೆ ಪಾಯಸ,ಲಡ್ದು ಮಾಡಿಡುತ್ತಿದ್ದ.

*ದೀಪಾವಳಿಯ ಸಣ್ಣ ರಾಕೆಟ್ ಈ ದೊಡ್ಡ ರಾಕೆಟ್ಗೆ ಕಾಲ್ ಮಾಡಿತ್ತತಂತೆ. ಆಗ ದೊಡ್ಡ ರಾಕೆಟ್ ನೋಡು ನಿಮ್ಗೆ ಬೆಂಕಿ ಕಡ್ಡಿಯಲ್ಲಿ ಬೆಂಕಿ ಕೊಟ್ಟಿದ್ದಕ್ಕೆ ಹಿಂಗಾಡ್ತೀರಿ..ನನಗೆ ನೋಡು ಲಕ್ಷಾಂತರ ಅಂಡೆ ಗ್ಯಾಸ್ ಕರ್ಚು ಮಾಡಿ ಬೆಂಕಿ ಇಕ್ಕಿದಾರೆ......................ಮಕ್ಳು
*"ಭಾರತದಲ್ಲಿ ಸತತ ಸಂಭ್ರಮ ಪಡ್ತಿದ್ದಾರೆ"ಅಂತ ಚಿಕ್ಕ ರಾಕೆಟ್ ತಿಳಿಸಿದಾಗ ಅದ್ಕೆ ದೊಡ್ದ ರಾಕೆಟ್"ಅವ್ರಿಗೇನು ಬೆಂಕಿ ಇಕ್ಕಿದ್ದು ನನ್ನ ಹಿಂದಕ್ಕೆ ಅಲ್ವಾ..ನಿನ್ಗೆ ಇನ್ನೊಂದು ವಿಷ್ಯ ಗೊತ್ತ ನಾನು ಹೋಗ್ತಿರ್ಲಿಲ್ಲ..ಯಾವನೊಬ್ಬ ಬಂದು ನಾನು ಸ್ವಲ್ಪ ಕ್ರಾಸ್ ನಿಂತಿದ್ದನ್ನು ನೋಡಿ ನೇರ ನಿಲ್ಲಿಸಿಬಿಟ್ಟ ಮಗ ಇಲ್ಲಾಂದ್ರೆ ಅಲ್ಲೇ ಇರ್ತಿದ್ದೆ"

*ಚಂದ್ರನ ಫೋನ್ ನಂಬರ್ ಇಲ್ಲಾಂತ ರಾಕಿಗೆ ಟೆನ್ಸನ್ ಆಗಿದೆ.ಯಾಕಂದ್ರೆ ಒಂದು ಎರಡು ಸಾವಿರ ಬರ್ನಲ್ ಮುಲಾಮು ತೆಗೆದಿಡಲು ಹೇಳ್ಬೇಕಿತ್ತಂತೆ...

*ಮುಂದೆ ನಿರೀಕ್ಷಿಸಿ

6 comments:

SHREE (ಶ್ರೀ) said...

KHARMA KAANDA! BETHE BELE IJJAA??

ಶ್ರೀನಿಧಿ.ಡಿ.ಎಸ್ said...

ok!

ರಾಧಾಕೃಷ್ಣ ಆನೆಗುಂಡಿ. said...

ಚಂದ್ರನತ್ತ ಹೊರಟ್ಟದ್ದು ರಾಕೆಟ್ ಅಲ್ಲ. ಉಪಗ್ರಹ.ಜೊತೆಗಿದ್ದದ್ದು ರಾಕೆಟ್

sapna said...

ಅಲ್ಲಾ ಇಷ್ಟ್ ದಿನ ನನ್ ಬ್ಲಾಗ್ ಓದಿಲ್ಲ ನೀವು ಅಂತ ಸಿಕ್ದಾಗೆಲ್ಲ ಬೊಬ್ಬೆ ಹೊಡಿತಿದ್ರೀ...ಇನ್ನೊಂದ್ ಸಲ ಈ ಚಿಕ್ ಮಕ್ಳ ಜೋಕ್ ಗಳ್ನ ರಾಕೆಟ್ಟು, ಬಾಂಬುಗಳ್ಗೆ ಬದಲಾಯಿಸಿ ಓದೋರಿಗೆ ತಲೆ ಕೆಡಿಸಿದ್ರೆ ಹುಷಾರ್!

ಚಿತ್ರಾ ಕರ್ಕೇರಾ said...

ದಾಮು..ನನ್ನ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗ್ ಶುಭಾರಂಭಗೊಂಡಿದೆ..ಚೆನ್ನಾಗಿದೆ. ಇನ್ನಷ್ಟು ಬರೆ..ನಿರೀಕ್ಷೆಯಲ್ಲಿರುತ್ತೇನೆ.
-ಚಿತ್ರಾ

ಜಲನಯನ said...

ಅಲ್ಲರೀ...ಯಾವುದೋ ಒಂದು ಹಾಸ್ಯಕ್ಕೆ ಹೀಗೇ ಇರ್ಬೇಕು ಅಂತ ಏನೂ ಇಲ್ವಲ್ಲಾ...ರಾಕೆಟ್ಟೋ ಪಾಕೆಟ್ಟೋ..ಅಂತೂ ಭಾರತದ ಪಾಕೆಟ್ಟು ಕಿತ್ತು ಪರ್ಸು ಸಮುದ್ರಕ್ಕೆ ಬಿದ್ದಿದೆ...ಈ ಸಲ....
ಹಹಹ ರಾ-ಕೆಟ್ಟು ಹೋಯಿತಷ್ಟೆ.. ರಾಧಾ ಕೃಷ್ಣರೇ...ನಕ್ಕು ಬಿಡೀಪಾ....no seriousness...